Wednesday, January 5, 2011

ತಂತ್ರಾಂಶ: ಸರ್ಕಾರ ಕಣ್ಣು ತೆರೆವುದೆ?

ತಂತ್ರಾಂಶ: ಸರ್ಕಾರ ಕಣ್ಣು ತೆರೆವುದೆ?
-ಹೊಸಹಳ್ಳಿ ದಾಳೇಗೌಡ, ಗೇರುಸೊಪ್ಪ, ಉತ್ತರಕನ್ನಡ ಜಿಲ್ಲೆ.
http://www.prajavani.net/Content/Apr282010/netmail20100427182145.asp

ಇಂದಿನ ಸ್ಪರ್ಧಾತ್ಮಕ ಹಾಗೂ ಸಂಶೋಧನೆಯ ಯುಗದಲ್ಲಿ ಯಾವುದೇ ತಂತ್ರಾಂಶದ ಸೋರ್ಸ್ ಕೋಡ್ ಮುಕ್ತವಾಗಿದ್ದರೆ ಆ ಭಾಷೆ ಬೆಳೆಯಲು ಸಾಧ್ಯವಾಗುತ್ತದೆ. ಇದನ್ನು ಸರ್ಕಾರ ಅರಿಯಬೇಕಿದೆ.
ಡಾ.ರಾಮಕೃಷ್ಣ ಮರಾಠೆ, (ವಾ.ವಾ. ಏ.21) ತಮ್ಮ ಪತ್ರದಲ್ಲಿ “ಕುವೆಂಪು ಕನ್ನಡ ತಂತ್ರಾಂಶ ಏನಾಯ್ತು? ಎಂದು ಪ್ರಶ್ನಿಸಿದ್ದಾರೆ. ಇದು ಕನ್ನಡಿಗರೆಲ್ಲರ ಪ್ರಶ್ನೆಯೂ ಹೌದು. ಏಕೆಂದರೆ ಬಹುತೇಕ ಸರ್ಕಾರಿ ಕೆಲಸಗಳೆಲ್ಲ ಹೀಗೆಯೇನೋ ಎನ್ನುವಂತಾಗಿದೆ.

ಈಗ ಬಳಕೆಯಲ್ಲಿರುವ ಕೆಲವು ಕನ್ನಡ ತಂತ್ರಾಂಶಗಳಲ್ಲಿ ಹಲವಾರು ನ್ಯೂನತೆಗಳಿರುವುದನ್ನು ಅದರ ಬಳಕೆ ಮಾಡುವವರಿಗೆ ತಿಳಿದದ್ದೇ ಆಗಿದೆ. ಸರ್ಕಾರವು ಕನ್ನಡವನ್ನು ಗಣಕೀಕರಣ ಮಾಡುವ ಉದ್ದೇಶದಿಂದ “ಕನ್ನಡ ಗಣಕ ಪರಿಷತ್‌”ನ್ನು ಅಸ್ತಿತ್ವಕ್ಕೆ ತಂದು, ತನ್ಮೂಲಕ ‘ನುಡಿ’ ತಂತ್ರಾಂಶವನ್ನು ಹೊರತಂದಿತು.
ಅಂತೆಯೇ ಇದನ್ನೇ ಕಡ್ಡಾಯವಾಗಿ ಉಪಯೋಗಿಸಬೇಕೆಂದೂ, ಇದೇ ಮಾದರಿ ತಂತ್ರಾಂಶ ಎಂತಲೂ ನಿರ್ಧರಿಸಿ, ಸಾಹಿತಿಗಳ, ಲೇಖಕರ, ಪ್ರಕಾಶಕರ, ಉದ್ಯಮಿಗಳ ಭಾಷಾ ತಜ್ಞರ, ತಂತ್ರಜ್ಞರ ಅವಜ್ಞೆಗೆ ಗುರಿಯಾದದ್ದು ಈಗ ಇತಿಹಾಸ.

ಖ್ಯಾತ ಸಾಹಿತಿ ದಿವಂಗತ ಪೂರ್ಣಚಂದ್ರ ತೇಜಸ್ವಿ, ಚಂದ್ರಶೇಖರ ಕಂಬಾರ, ಲಿಂಗದೇವರು ಹಳೇಮನೆ, ಪ್ರೊ. ವೆಂಕಟಸುಬ್ಬಯ್ಯ, ‘ಈ-ಕವಿ’ಯ ವಿ.ಎಂ. ಕುಮಾರಸ್ವಾಮಿ ಹಾಗೂ ಕನ್ನಡಾಭಿಮಾನವುಳ್ಳ ಮತ್ತು ಕನ್ನಡ ತಂತ್ರಾಂಶ ಬಳಸುವ ಅನೇಕರು ‘ನುಡಿ’ ತಂತ್ರಾಂಶದಲ್ಲಿನ “ನ್ಯೂನತೆಗಳು ಮತ್ತು ಏಕಸ್ವಾಮ್ಯ”ವನ್ನು ಖಂಡಿಸಿ, ಆರು ವರ್ಷಗಳಿಂದ ಹೋರಾಟ ನಡೆಸುತ್ತಾ, ಮುಖ್ಯಮಂತ್ರಿಗಳು, ಸಚಿವರು, ಕಾರ್ಯದರ್ಶಿಗಳಿಗೆ ಪತ್ರ ಮುಖೇನ ವಿನಂತಿಸಿದರೂ ಸರ್ಕಾರ ಇನ್ನೂ ಕಣ್ಣು ತೆರೆದೇ ಇಲ್ಲ!

ಆದ್ದರಿಂದ ‘ಕನ್ನಡ ಗಣಕ ಪರಿಷತ್’ನ್ನು ಸರ್ಕಾರ ಕೂಡಲೇ ರದ್ದುಪಡಿಸಿ, ‘ನುಡಿ’ ತಂತ್ರಾಂಶದ “ಸೋರ್ಸ್ ಕೋಡ್‌”ನ್ನು “ಓಪನ್ ಸೋರ್ಸ್‌” ಸಾಫ್ಟ್‌ವೇರ್‌ನ್ನಾಗಿ ಮಾಡಬೇಕಿದೆ. ತನ್ಮೂಲಕ ತಂತ್ರಾಂಶದ ಅಭಿವೃದ್ಧಿಯಲ್ಲಿ ಪ್ರಕಾಶಕರು, ಲೇಖಕರು, ತಂತ್ರಜ್ಞರು, ಉದ್ಯಮಿಗಳು, ತಂತ್ರಾಂಶ ತಯಾರಕರು ಭಾಗಿಯಾಗುವಂತೆ ಅನುವು ಮಾಡಿಕೊಡಬೇಕು.

ಇಂದಿನ ಸ್ಪರ್ಧಾತ್ಮಕ ಹಾಗೂ ಸಂಶೋಧನೆಯ ಯುಗದಲ್ಲಿ ಯಾವುದೇ ತಂತ್ರಾಂಶದ ಸೋರ್ಸ್ ಕೋಡ್ ಮುಕ್ತವಾಗಿದ್ದರೆ ಆ ಭಾಷೆ ಬೆಳೆಯಲು ಸಾಧ್ಯವಾಗುತ್ತದೆ. ಇದನ್ನು ಸರ್ಕಾರ ಅರಿಯಬೇಕಿದೆ.

ಈಗಿನ ದಿನಗಳಲ್ಲಿ ಕಂಪ್ಯೂಟರ್ ಜಗತ್ತಿನಲ್ಲಿ ಎಂಥ ತಂತ್ರಜ್ಞಾನವೂ ಆರು ತಿಂಗಳಿಗಿಂತ ಹೆಚ್ಚಿನ ಆಯಸ್ಸನ್ನು ಹೊಂದಿಲ್ಲ! ಹೀಗಿದ್ದೂ ಎಲ್ಲರೂ “ನಿಂತ ನೀರಾಗಿರುವ” ‘ನುಡಿ’ ತಂತ್ರಾಂಶವನ್ನೇ ಬಳಸಬೇಕೆನ್ನುವವರಿಗೆ ಏನೆನ್ನಬೇಕು?

No comments:

Post a Comment

Followers