ತೇಜಸ್ವಿ: ಮಾತು ಮೂರು ಅರ್ಥ ನೂರಾರು
ಕನ್ನಡ ಸಾಫ್ಟ್ ವೇರ್ ಅಭಿವೃದ್ದಿ ಅವನತಿಯ ಹಾದಿಯಲ್ಲಿದೆ. ಈ ಅವನತಿಗೆ ಮತ್ತು ಕನ್ನಡ ಸಾಫ್ಟ್ ವೇರ್ ನೆಲಕಚ್ಚು ವಂತೆ ಮಾಡಿದಕ್ಕೆ ಕನ್ನಡ ಗಣಕ ಪರಿಷತ್ ಎಂಬ ಹವ್ಯಾಸಿ ಸಂಸ್ಥೆ ಮತ್ತು ಐ ಟಿ ಸಚಿವಾಲಯದ ಅಧಿಕಾರಿಶಾಯಿಯೇ ಕಾರಣ.: ಕೆ.ಪಿ.ಪೂರ್ಣಚಂದ್ರ ತೇಜಸ್ವಿ. ಪ್ರಜಾವಾಣಿ: ೦೬-೦೮-೨೦೦೪
ಜಾಗತೀಕರಣದ ಸಂದರ್ಭದಲ್ಲಿ ಇತಿಮಿತಿಗಳೇ ಗೊತ್ತಿಲ್ಲದ ಅದುನಿಕ ತಂತ್ರ ಜ್ನಾನದ ಅಪಾರ ಶಕ್ತಿ ಸಾಮರ್ಥ್ಯಗಳು ತನಗೆ ಸಹಕರಿಸಿದ ಭಾಷೆ ಅಥವಾ ತಾಂತ್ರಿಕತೆಗಳನ್ನು ನಾಶ ಮಾಡುವ ಸಾಧ್ಯತೆ ಇದೆ. ಇಂಥ ಚಾರಿತ್ರಿಕ ತಿರುವಿನಲ್ಲಿ ನಿಂತಿರುವ ಕನ್ನಡ ಭಾಷೆಯ ಬಗ್ಗೆ ಈಗ ನಾವು ಉಪೇಕ್ಷೆ ಮಾಡಿದರೆ ಆದಕ್ಕೆ ತೆರಬೇಕಾದ ದಂಡ ತೀರಾ ದುಬಾರಿಯಾಗಬಹುದು. :ಕೆ.ಪಿ.ಪೂರ್ಣಚಂದ್ರ ತೇಜಸ್ವಿ. ಪ್ರಜಾವಾಣಿ ೦೭-೦೮-೨೦೦೪
ಕನ್ನಡ ತಂತ್ರಾಂಶ ಅಭಿವೃದ್ಧಿಯ ಬಗೆಗಿನ ಸರಕಾರದ ನಿರಾಸಕ್ತಿಯನ್ನು ಕಂಡು ಕೋಪಗೊಂಡ ತೇಜಸ್ವಿ ಹೇಳಿದ್ದು ಹೀಗೆ. "ಸಾಹಿತ್ಯ ಸಮ್ಮೇಳನದ ಹೆಸರಲ್ಲಿ ಕೋಟಿಗಟ್ಲೆ ವ್ಯಯಿಸುವ ಸರ್ಕಾರ ತಂತ್ರಾಂಶ ಅಭಿವೃದ್ಧಿಗೇಕೆ ಹಣ ನೀಡಬಾರದು?"
ಕನ್ನಡ ತಂತ್ರಾಂಶಕ್ಕೇಕೆ ಅಷ್ಟೊಂದು ಪ್ರಾಮುಖ್ಯ ಎಂಬ ಪ್ರಶ್ನೆಗೆ: "ಕಂಪ್ಯೂಟರ್‍ನಲ್ಲಿ ಇಂಗ್ಲೀಷ್‌ನಷ್ಟೇ ಸರಳವಾಗಿ ಮತ್ತು ಸಹಜವಾಗಿ ಕನ್ನಡವನ್ನು ಬಳಸಲು ಸಾಧ್ಯವಾಗದಿದ್ದರೆ ಭಾಷೆಯನ್ನು ಉಳಿಸಲು ಸಾಧ್ಯವಿಲ್ಲ"
ಎಸ್.ಎಂ.ಕೃಷ್ಣನೇತೃತ್ವದ ಮೈಕ್ರೋಸಾಫ್ಟ್ ಕಂಪೆನಿಯೊಂದಿಗೆ ತಂತ್ರಾಂಶ ಅಭಿವೃದ್ಧಿಗೆ ಒಪ್ಪಂದ ಮಾಡಿಕೊಂಡಾಗ: "ಕರ್ನಾಟಕ ಸರ್ಕಾರ ಮೈಕ್ರೋಸಾಫ್ಟ್‌ನಂತಹ ಬಹುರಾಷ್ಟ್ರೀಯ ಸಂಸ್ಥೆಗೆ ಕನ್ನಡವನ್ನು ಅಡ ಇಡುವುದು ಸರಿಯಲ್ಲ. ಭಾಷೆಗೆ ತಕ್ಕ ಹಾಗೆ ತಂತ್ರಾಂಶ ಇರಬೇಕೇ ಹೊರತು, ತಂತ್ರಾಂಶಕ್ಕೆ ತಕ್ಕ ಹಾಗೆ ಭಾಷೆ ಬದಲಾಗಬೇಕು ಎಂದರೆ ಯಾವ ನ್ಯಾಯ?"
ಕನ್ನಡ ವಿಶ್ವವಿದ್ಯಾಲಯದಿಂದ ತೇಜಸ್ವಿಯವರಿಗೆ ನಾಡೋಜ ಪುರಸ್ಕಾರ ನೀಡಲು ವಿಶ್ವವಿದ್ಯಾಲಯದವರು ಸಂಪರ್ಕಿಸಿದಾಗ "ಕನ್ನಡ ತಂತ್ರಾಂಶ ಅಭಿವೃದ್ಧಿಮಾಡಿ ಅದು ನನಗೆ ನೀಡಿದ ನಾಡೋಜವಾಗುತ್ತದೆ" ಎಂದಿದ್ದರು.
ಗುರುಲಿಂಗ ಕಾಪಸೆಯವರೊಂದಿಗೆ ಮಾತನಾಡುತ್ತಿದ್ದ ಮರಾಠಿ ಸಾಹಿತಿ ವಿ.ಸಾ. ಖಾಂಡೇಕರರು 'ನಿಮ್ಮ ತೇಜಸ್ವಿ ಬೇರೆ ಭಾಷೆಯ ಲೇಖಕರಿಗಿಂತ ನೂರು ವರ್ಷ ಮುಂದಿದ್ದಾರೆ' ಎಂದಿದ್ದರಂತೆ. 'ಕಂಪ್ಯೂಟರ್ ಕೊಂಡ ಮೊದಲ ಕನ್ನಡ ಸಾಹಿತಿ' ಎಂದು ಕನ್ನಡಿಗರು ಗುರುತಿಸುವ ಮೊದಲೇ, ಸುಮಾರು ಇಪ್ಪತ್ತು ವರ್ಷಗಳ ಹಿಂದೆಯೇ ಖಾಂಡೇಕರರು ತೇಜಸ್ವಿ ಸಾಹಿತ್ಯದ ಅನನ್ಯತೆಯನ್ನು ಗುರುತಿಸಿದ್ದರು!
೨೦೦೪ ರಲ್ಲಿ ಮೈಸೂರು ವಿಶ್ವವಿದ್ಯಾಲಯ ಉಪಕುಲಪತಿ ಯಾಗಿದ್ದ ಡಾ. ಶಶಿದರ ಪ್ರಸಾದ್ ರವರು , ತೇಜಸ್ವಿ ಯವರಿಗೆ , ಕುವೆಂಪು ಜನ್ಮ ಶತಮಾನೋತ್ಸವ ಅಂಗವಾಗಿ, ಕುವೆಂಪು ಅವರ ಪ್ರತಿಮೆ ಯನ್ನು , ವಿಶ್ವವಿದ್ಯಾಲ ದಲ್ಲಿ , ಸ್ಥಾಪಿಸಬೇಕೆಂದು ಹೇಳಿದಾಗ, ತೇಜಸ್ವಿ ಯವರು, ಹೇಳಿದ್ದು ಏನು ಅಂದರೆ , ಅವರ ಪ್ರತಿಮೆ ಬದಲು, "ಕುವೆಂಪು ಅವರ ಹೆಸರಲ್ಲಿ ಕನ್ನಡ ತಂತ್ರಾಂಶ ಅಬಿವೃದ್ದಿ ಕೇಂದ್ರ" ಮಾಡಿ ಅಂತ ಹೇಳಿದ್ದರು. ಇದರ ಪ್ರಕಾರ ಮೈಸೂರು ವಿಶ್ವ ವಿದ್ಯಾ ನಿಲಯದ ಮಾನ್ಯ ಉಪಕುಲಪತಿಗಳಾದ ಶ್ರೀ. ಶಶಿದರ ಪ್ರಸಾದ ಅವರು ದಿನಾಂಕ ೨೩-೧೨-೨೦೦೪ ರಂದು " ಕುವೆಂಪು ಅಂತರರಾಷ್ಟ್ರೀಯ ತಂತ್ರಾಂಶ ಮತ್ತು ತಂತ್ರ ಜ್ಞಾನ ಕೇಂದ್ರ " ಮಾಡುತ್ತವೆ ಅಂತ ಘೋಷಣೆ ಮಾಡಿದ್ದರು.
Wednesday, January 5, 2011
Subscribe to:
Post Comments (Atom)
Followers
Blog Archive
-
▼
2011
(12)
-
▼
January
(11)
- Kannada Development Authority - KDA of GoK
- Officials Connected with MESSUP of Kannada Software
- KGP Founder Secretary Sri. Sathyanarayana Letter- ...
- A. Sathyanarayana on NUDI, BARAHA, KAGAPA/KGP
- Dr. U. B. PAVANAJA on Font Issues. Birth of BARAHA...
- ತೇಜಸ್ವಿ: ಮಾತು ಮೂರು ಅರ್ಥ ನೂರಾರು
- ಕನ್ನಡ ತಂತ್ರಾಂಶ ದ ತೊಂದರೆಗಳು
- ತಂತ್ರಾಂಶ: ಸರ್ಕಾರ ಕಣ್ಣು ತೆರೆವುದೆ?
- ಈ ತಂತ್ರಾಂಶ ಏನಾಯ್ತು?
- ಬರಹ ಕನ್ನಡ ಫಾಂಟ್ಸ್ ಅನ್ನು ಶೇಷಾದ್ರಿ ವಾಸು ಸೃಷ್ಟಿ ಮಾಡಲಿಲ್ಲ
- ಕನ್ನಡ ತಂತ್ರಾಂಶದ-ಸ್ಥಿತಿ ಗತಿ
-
▼
January
(11)
No comments:
Post a Comment