Wednesday, January 5, 2011

ಈ ತಂತ್ರಾಂಶ ಏನಾಯ್ತು?

ಈ ತಂತ್ರಾಂಶ ಏನಾಯ್ತು?
ಖ್ಯಾತ ಚಿಂತಕ ಸಾಹಿತಿ ಕೆ.ಪಿ.ಪೂರ್ಣ ಚಂದ್ರ ತೇಜಸ್ವಿ ಅವರ ಪ್ರಯತ್ನದ ಫಲವಾಗಿ ಹಂಪಿ ಕನ್ನಡ ವಿಶ್ವವಿದ್ಯಾಲಯ 2007ರಲ್ಲಿ ರೂಪಿಸಿದ ‘ಕುವೆಂಪು ಕನ್ನಡ ತಂತ್ರಾಂಶ’ ಅಭಿವೃದ್ಧಿ ಕಾಣದೆ ಮೂಲೆಗುಂಪಾಗಿದೆ.

ಕನ್ನಡದ ಜ್ಞಾನ ಕ್ಷಿತಿಜವನ್ನು ವಿಸ್ತಾರ ಗೊಳಿಸುವ ಅನನ್ಯ ಹಂಬಲದಿಂದ ಮೂಡಿ ಬಂದಿದ್ದ ಈ ತಂತ್ರಾಂಶ ಇಂದು ಅಲಭ್ಯವಾಗಿದೆ.
ಅತ್ಯಂತ ಸರಳವಾಗಿ ಡೌನ್‌ಲೋಡ್ ಸೌಲಭ್ಯವಿರುವ ಸಂದರ್ಭದಲ್ಲಿಯೂ ಕಳಪೆ ಗುಣಮಟ್ಟ ಹೊಂದಿರುವ ಈ ತಂತ್ರಾಂಶ ಯಾವುದೇ ಕಂಪ್ಯೂಟರಿನಲ್ಲಿಯೂ ಅಳವಡದಿ ರುವುದು ವಿಷಾದನೀಯ. ಹೊಸ ಹೊಸ ಆವೃತ್ತಿಗಳು ಕಾಣುತ್ತವೆ ಎಂಬ ಭ್ರಮೆಯಲ್ಲಿದ್ದ ಕನ್ನಡಿಗರಿಗೆ ಇದರಿಂದ ನಿರಾಶೆಯಾಗಿದೆ. ಕನ್ನಡ ವಿಶ್ವವಿದ್ಯಾಲಯ, ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಅತ್ಯಾಧುನಿಕ ಮಾದರಿಯ ಸರ್ವ ಜನೋಪ ಯೋಗಿ ತಂತ್ರಾಂಶವನ್ನು ರೂಪಿಸ ಬೇಕಾದ ಅನಿವಾರ್ಯತೆ ಇಂದು ಬಹಳಷ್ಟಿದೆ.
ಪುಸ್ತಕ ಪ್ರಕಟಣೆಗಾಗಿ ಅನೇಕರು ಇಂದು ಶ್ರೀಲಿಪಿಗಿಂತ ನುಡಿ ತಂತ್ರಾಂಶವನ್ನು ಉಪ ಯೋಗಿ ಸುತ್ತಿದ್ದಾರೆ. ನುಡಿ ತಂತ್ರಾಂಶ ಕ್ಕಿಂತಲೂ ಸಮೃದ್ಧ ವಾಗಿ ಹೊರಬರ ಬೇಕಾಗಿದ್ದ ಕುವೆಂಪು ತಂತ್ರಾಂಶ ಪ್ರಾರಂಭದಲ್ಲಿ ಹೀಗೆ ಅವಜ್ಞೆಗೊಳಗಾಗಿರುವುದು ಕನ್ನಡಿಗರೆಲ್ಲ ನಾಚಿಕೆ ಪಡುವ ಸಂಗತಿಯೇ ಸರಿ.
-ಡಾ. ರಾಮಕೃಷ್ಣ ಮರಾಠೆ, ಬೆಳಗಾವಿ
http://www.prajavani.net/Content/Apr212010/netmail20100420180990.asp

No comments:

Post a Comment

Followers